Saturday 13 May 2017

QUOTES ON MEDITATION ಝಾನ (ಧ್ಯಾನ)

          87. ಝಾನ (ಧ್ಯಾನ)


1.            ಮನಸ್ಸಿನ ಏಕತೆಯೇ ಸಮಾಧಿ. ನಾಲ್ಕು ಸ್ಮೃತಿ ಪಟ್ಠಾನವೇ ಅವುಗಳ ಧ್ಯಾನ ವಿಷಯವಾಗಿದೆ. ನಾಲ್ಕು ಸಮ್ಯಕ್ ಪ್ರಯತ್ನಗಳೇ ಅದರ ಸಲಕರಣೆಗಳು, ಇವು ನಿರಂತರ ಅಭ್ಯಾಸದ ವೃದ್ಧಿಯೇ ಸಮಾಧಿ ವೃದ್ಧಿ.437

2.            ನಾಲು ವಿಧದ ಧ್ಯಾನಗಳಿವೆ : ಜೀವನದಲ್ಲೇ ಸುಖ ಲಭಿಸುವಂತಹುದು. ಜ್ಞಾನ ಮತ್ತು ದರ್ಶನವನ್ನು ನೀಡು ವಂತಹದು. ಜಾಗರೂಕತೆಯನ್ನು ಸ್ಥಾಪಿಸುವಂತಹುದು ಮತ್ತು ಅಸವವನ್ನು ನಾಶಪಡಿಸುವಂತಹದು.         438

3.            ಮೈತ್ರಿಯ ಧ್ಯಾನವನ್ನು ಅಭಿವೃದ್ಧಿಗೊಳಿಸು. ಇದರಿಂದಾಗಿ, ದ್ವೇಷವು ಅಂತ್ಯವಾಗುತ್ತದೆ. ಕರುಣಾ ಧ್ಯಾನವನ್ನು ಅಭಿವೃದ್ಧಿಗೊಳಿಸು. ಇದರಿಂದಾಗಿ ಕ್ರೌರ್ಯವು ಅಂತ್ಯವಾಗುತ್ತದೆ. ಮುದಿತಾ ಧ್ಯಾನವನ್ನು ಅಭಿವೃದ್ಧಿಗೊಳಿಸು ಇದರಿಂದಾಗಿ ಅಸೂಯೆ ಅಂತ್ಯವಾಗುತ್ತದೆ. ಉಪೇಕ್ಖಾ ಧ್ಯಾನವನ್ನು ಅಭಿವೃದ್ಧಿಗೊಳಿಸು ಇದರಿಂದಾಗಿ ಪ್ರಿಯ ಅಪ್ರಿಯ ಭಾವ ಅಂತ್ಯವಾಗುತ್ತದೆ. ಅಶುಭಾ ಧ್ಯಾನವನ್ನು ಅಭಿವೃದ್ಧಿಗೊಳಿಸು ಇದರಿಂದಾಗಿ ಸುಂದರತೆಯ ಭಾವ ಅಂತ್ಯವಾಗುತ್ತದೆ. ಅನಿತ್ಯ ಧ್ಯಾನವನ್ನು ಅಭಿವೃದ್ಧಿಗೊಳಿಸು ಇದರಿಂದಾಗಿ ನಾನು ಎಂಬ ಅಹಂ ಅಂತ್ಯವಾಗುತ್ತದೆ. ಅನಾಪಾನಾಸತಿ ಧ್ಯಾನವನ್ನು ಅಭಿವೃದ್ಧಿಗೊಳಿಸು ಇದರಿಂದಾಗಿ ಮಹತ್ಫಲ ದೊರೆಯುತ್ತದೆ, ಅತ್ಯಂತ ಲಾಭ ಸಿಗುತ್ತದೆ.440

4.            ನೋಡುವಾಗ ನೋಡುವುದರಲ್ಲಿ ಮಾತ್ರ ತಲ್ಲೀನನಾಗು. ಕೇಳುವಾಗ ಕೇಳುವುದರಲ್ಲಿ ಮಾತ್ರ ತಲ್ಲೀನನಾಗು. ಇಂದ್ರಿಯಗಳನ್ನು ಅನುಭವಿಸುವಾಗ ಅನುಭವಿಸುವುದರಲ್ಲಿ ಮಾತ್ರ ತಲ್ಲೀನನಾಗು. ಅರಿಯುವಾಗ ಅರಿಯುವುದರಲ್ಲಿ ಮಾತ್ರ ತಲ್ಲೀನನಾಗು.                440

5.            ಸಮಾಧಿಯನ್ನು ಅಭಿವೃದ್ಧಿಗೊಳಿಸಿ, ಸಮಾಹಿತವಾದ ಚಿತ್ತ ಪಡೆದವ ಯಥಾಭೂತವಾಗಿ ಅರಿಯುತ್ತಾನೆ.             441


6.            ಪ್ರಶಾಂತತೆ ಬೆಳೆಸಿದಾಗ, ಮನಸ್ಸು ಅಭಿವೃದ್ಧಿಯಾಗುತ್ತದೆ. ಆಗ ಲೋಭವು ನಶಿಸುತ್ತದೆ. ಪ್ರಜ್ಞಾವು ಬೆಳೆಸಿದಾಗ ಸಮ್ಮದೃಷ್ಟಿಯು ಅಭಿವೃದ್ಧಿಯಾಗುತ್ತದೆ, ಆಗ ಮೋಹವು ನಶಿಸುತ್ತದೆ.               442

No comments:

Post a Comment